ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ರೂಫ್‌ಟಾಪ್ ಸೌರ

nazz
nazz
1 Min Read
ಸೋಲಾರ್ ಮನೆಗಳಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಕೆಇಆರ್‌ಸಿ?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ರೂಫ್‌ಟಾಪ್ ಸೌರ ವಿದ್ಯುತ್ ಗ್ರಿಡ್‌ಗೆ ರಫ್ತು ಮಾಡುವ ಹೆಚ್ಚುವರಿ ವಿದ್ಯುತ್ ದರ ಕಡಿತಕ್ಕೆ ಮುಂದಾಗಿದೆ. ಈ ಪ್ರಸ್ತಾಪವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸರ್ಕಾರಗಳು ಸೌರ ಇಂಧನ ಪ್ರೋತ್ಸಾಹಿಸುತ್ತಿರುವಾಗ, ಈ ನಿರ್ಧಾರ ಹೊಸ ಗ್ರಾಹಕರನ್ನು ನಿರುತ್ಸಾಹಗೊಳಿಸಿ ಹಸಿರು ಇಂಧನ ಪರಿವರ್ತನೆಗೆ ಹಿನ್ನಡೆ ಉಂಟುಮಾಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.

ಬೆಂಗಳೂರು, ಜೂ.22: ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ಮುಕ್ತ ಹಸಿರು ಇಂಧನಕ್ಕೆ ಆದ್ಯತೆ ನೀಡಲು ಮನೆಗಳ ಮೇಲೆ ಸೌರ ವಿದ್ಯುತ್ (Rooftop Solar) ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಗ್ರಾಹಕರು ಗ್ರಿಡ್‌ಗೆ ರಫ್ತು ಮಾಡುವ ಹೆಚ್ಚುವರಿ ಸೌರ ವಿದ್ಯುತ್‌ನ ದರವನ್ನು (Tariff) ಕಡಿತಗೊಳಿಸಲು ಮುಂದಾಗಿದೆ. ನಿಯಂತ್ರಕರ ಈ ನೀತಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ವಾಸ್ತವದಿಂದ ದೂರವಿದ್ದಾರೆಯೇ? ಎಂಬ ಪ್ರಶ್ನೆ ಮೂಡಿಸಿದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​  ಎಂಬ ಎಕ್ಸ್​​ ಖಾತೆಯಲ್ಲಿ ಈ ಬಗ್ಗೆ ಒಂದು ವರದಿಯನ್ನು ನೀಡಿದೆ.
Share This Article